- ಕರಿಯ.. ಮಚ್ಚಾ.. ಬಸ್ಯ..
- ರಾಮ್.. ರಾಜ್.. ಚಂದನ್... ವಿಜಯ್..
- ಮಳೆಯಲಿ ಜೊತೆಯಲಿ.. ಮುಂಗಾರು ಮಳೆ.. ಮೇಘವೇ ಮೇಘವೇ...
- ಅನಿಸುತಿದೆ.. ಹೊಡಿಮಗಾ.. ಯುಗ ಯುಗಗಳೇ ಸಾಗಲಿ...
- ಹೆಚ್ಚಾಗಿ ಹಳ್ಳಿಗಳಲ್ಲಿ ಕಂಡು ಬರುವ ಹೆಸ್ರುಗಳು ..
- attendance sheet..
- ಜೂನ್-ಅಕ್ಟೋಬರ್ ತಿಂಗಳುಗಳು..
- ಯಾವ್ದೋ ಕನ್ನಡ ಚಿತ್ರಗಳ ಹಾಡುಗಳ ಮೊದಲ ಸಾಲುಗಳು..
ಹೀಗೆನಾದ್ರು ನೀವು ಅಂದುಕೊಂಡರೆ ಅದು ತಪ್ಪು.. ಪ್ರಾರಂಭದಲ್ಲಿ ಹೇಳಿದ 4 ಸಾಲುಗಳು ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳು. ಕೆಲವು ಹಾಸ್ಯ ಅಥವಾ ಕೆಲವು ಒಳ್ಳೆಯ ಚಿತ್ರಗಳನ್ನು ಬಿಟ್ರೆ ಹೆಚ್ಚು-ಕಮ್ಮಿ ಎಲ್ಲ ಚಿತ್ರಗಳೂ ನಾಲ್ಕರಲ್ಲಿ ಯಾವುದಾದರೂ ಒಂದಕ್ಕೆ ಸೇರುತ್ತದೆ.. ಅಷ್ಟೇ ಅಲ್ಲ.. ಆ ಚಿತ್ರದ ಕಥೆಯನ್ನು ಆರಾಮಾಗಿ ತಿಳಿದುಕೊಂಡು ಬಿಡ್ಬೋದು.. ಸಂಕ್ಷಿಪ್ತವಾಗಿ ಹೀಗೆ ಹೇಳ್ಬೋದು ನೋಡಿ..
ಗುಂಪು 1:
ಸ್ವಲ್ಪ ಕಷ್ಟದಲ್ಲಿರೋ ಹುಡ್ಗ.. ಯಾವ್ದೋ ಘಟನೆಯ ನಂತರ ಬೆಂಗಳೂರಿನ ರೌಡಿ ಸಮಾಜಕ್ಕೆ ಹತ್ತಿರ ಬರೋದು.. ತುಂಬಾನೇ ಅತಿಶಯೋಕ್ತಿಯಾಗಿರುವ "ಲಾಂಗ್" ಹಿಡಿಯೋದು.. ಒಂದಷ್ಟು ಹೊಡೆದಾಟ.. ಅಲ್ಲಲ್ಲಿ ರಕ್ತ.. ಲಾಂಗ್ ನ ತುದಿಯಲ್ಲಿ ರಕ್ತ.. ಇಷ್ಟೆಲ್ಲಾ ಕಥೆ ನಡಿತಿರ್ಬೇಕಾರೆ ಒಂದು ಹುಡುಗಿಗೆ ಇವನ್ ಮೇಲೆ ಯದ್ವಾ-ತದ್ವಾ ಲವ್ವು.. ಫುಲ್ ಸಿಟ್ತಾಗಿರೋ ಗರಂ ಹುಡ್ಗ.. ಕ್ಯೂಟ್ ಆಗಿ ಬಿಳಿ-ಪಿಂಕ್ ಡ್ರೆಸ್ ಹಾಕಿರೋ ಅವಳು.. ಒಂದಷ್ಟು ಹಾಡುಗಳು.. ಹುಡುಗನಿಗೆ ನಾಗರಿಕತೆಯ ಪಾಠ.. ಅಷ್ಟರಲ್ಲಿ ಹುಡಗನ ಮನೆಯವರಿಗೆ ಇನ್ನೊಂದು ರೌಡಿಯ ಕಾಟ.. ಆ ರೌಡಿ ನ ಎತ್ತಂಗಡಿ ಮಾಡ್ಸಿ ಹುಡುಗ ಒಳ್ಳೆ ಮನ್ಶ ಆಗಿ ಆ ಹುಡುಗಿ ಜೊತೆ ಮದ್ವೆ..------ ಶುಭಂ ------
ಗುಂಪು 2:
ಇದ್ರಲ್ಲಿ ಹುಡ್ಗ ಲವ್ ಮದ್ದು ಬಿಟ್ಟು ಮತ್ತೇನಾರ ಮಾಡ್ತಿದಾನ ಅಂತ ಜಾಸ್ತಿ ಗೊತ್ತಾಗಲ್ಲ.. ಬರೀ ಲವ್ ಮಾಡೋಷ್ಟೇ ತೋರ್ಸ್ತಾರೆ.. ಮಳೆ-ಮಂಜು-ಮುಂಜಾನೆ-ಮುಸ್ಸಂಜೆ-ಹಳ್ಳಿ-ಗದ್ದೆ-ತೋಟ ಎಲ್ಲ ಇದ್ದೆ ಇರತ್ತೆ.. ಸೋನು ನಿಗಮ್ ಹಾಡು, ಮನೋ ಮೂರ್ತಿ ಲಿರಿಕ್ಸ್ ೧೦೦% ಗ್ಯಾರಂಟೀ.. ಹುಡ್ಗ ಅಂತು ಹುಡ್ಗಿನ ಆರಾಧಿಸಿ, ಪೂಜಿಸಿ, ನೈವೇದ್ಯ ಮಾಡಿ, ಕೊನೆಗೆ ತಾನೇ ಮಂಗಳಾರತಿ ಮಾಡ್ಕ್ಸೋತನೆ ಪಾಪ.. ಇಷ್ಟೆಲ್ಲಾ ಸೈಕಲ್ ಹೊದ್ದ್ರು ಅವ್ನ ಲವ್ವು ಜಾಸ್ತಿನೆ ಆಗುತ್ತೆ.. ಹಾಂ ಇನ್ನೊಂದ್ ವಿಷ್ಯ.. ಒಂದೆರಡು ಪ್ರಾಣಿ ಪಕ್ಷಿಗಳ ಹಿಂಸೆ ಆಗೋದಂತೂ ಇದ್ದೇ ಇರತ್ತೆ.. ಒಂದೆರಡು ಲವ್ ಲೆಟರ್ ಗಳು.. ಗಿಫ್ಟ್ ಗಳು.. ಆಮೇಲೆ ಫ್ಯಾಮಿಲಿ ಕಡೆ ಇಂದ ' ಟ್ವಿಸ್ಟ್ 'ಗಳು.. ಆದರೂ ಹೀರೋ ಸ್ವಲ್ಪನೂ ಹಿಂಜರಿದೆ ಅವಳನ್ನ ಗೆದ್ದೇ ಗೆಲ್ತಾನೆ.. ಮದ್ವೆ ಆಗೇ ಆಗತ್ತೆ..ಗುಂಪು 2:
ಕಾಲೇಜ್ ಗೆ ಹೋಗೋ ಹುಡ್ಗ.. ಮುಖ್ಯವಾಗಿ ಬೆಂಗಳೂರಿನ ಒಂದು ಇಂಜಿನಿಯರಿಂಗ್ ಕಾಲೇಜು.. ಹುಡ್ಗಂಗೆ ಬಾಸ್ಕೆಟ್ ಬಾಲ್, ಅಥವ ಇನ್ಯಾವ್ದೋ ಸ್ಪೋರ್ಟ್ಸ್ ಅಲ್ಲಿ ಚಾಂಪ್.. ಓದೋ ವಿಷಯದಲ್ಲೂ ಒಕೆನೇ.. ಅಷ್ಟೊತ್ತಿಗೆ ಹೀರೋ-in ದು ಎಂಟ್ರಿ.. ಅವಳಿಗೆ ಸ್ವಲ್ಪ ಜಂಭ, ಕೊಬ್ಬು.. ಅದು ಇದು ಚಾಲೆಂಜ್ ಅವರಿಬ್ರು ಮಧ್ಯ.. ಹಾಗು ಹೀಗೂ ಹುಡ್ಗ ಗೆದ್ದೇ ಗೆಲ್ತಾನೆ.. ಹುದಂದು 3-4 ಫ್ರೆಂಡ್ಸ್ ಮಾಡೋ PJ ಗಳು.. ಆಮೇಲೆ ನಿದಾನಕ್ಕೆ ಫುಲ್ ಪಿರೀತಿ.. ಅಪರೂಪಕ್ಕೆ ಫೈಟಿಂಗ್.. ಯುರೋಪ್ ಅಲ್ಲಿ ಶೂಟ್ ಮಡಿದ ಒಂದೆರಡು ಹಾಡುಗಳು.. ಹುಡುಗಿ ಅಪ್ಪ ಅಮ್ಮನ ಓಕೆ ತಗೊಳಕ್ಕೆ ಒಂದಷ್ಟು ಕಥೆಗಳು.. ಲಾಸ್ಟ್ ಗೆ ಇಬ್ರಿಗೂ ಕೆಲಸ.. ಮದ್ವೆ ಒಂದೊಂದ್ಸತಿ ಇಂಜಿನಿಯರಿಂಗ್ ಗು ಮುಂಚೆ.. ಇಲ್ಲಾಂದ್ರೆ ಆಮೇಲೆ..
------- ಶುಭಂ ------
ಗುಂಪು 3:
ಗುಂಪು 3:
-----ಶುಭಂ-------
ಗುಂಪು 4.
sandalwood ನ ನಿರ್ದೇಶಕರು ಸೇರ್ಕೊಂಡು ಕನ್ನಡ ಚಿತ್ರಗಳು ಯಾಕೆ ಚೆನ್ನಾಗಿ ಹೆಸರು ಮಾಡ್ತಿಲ್ಲ ಅಂತ ಸಮಾಲೋಚನೆ ನಡ್ಸಿದ್ರು.. ಸಿಕ್ಕಾಪಟ್ಟೆ ಮಾತು-ಕತೆ ಎಲ್ಲ ಮುಗ್ಸಿ ಕೊನೆಗೆ "ನಾವು ಇಷ್ಟೆಲ್ಲಾ ಕಷ್ಟ ಪಟ್ರು ಯಾಕೆ ಹೀಗಾಗ್ತಿದೆ ಅಂತ ಗೊತ್ತಾಗ್ತಿಲ್ಲ" ಅಂತ ಇತಿಶ್ರೀ ಹಾಡಿಬಿಟ್ರು..ಗುಂಪು 4.
ಯಾವ್ದಾದ್ರು ಹಾಡು ಹಿಟ್ ಆಗಿದ್ರೆ ಅದೇ ಸಾಕಪ್ಪ ಫಿಲಂ ಮಾಡಕ್ಕೆ.. ೩-೪ ಪದಗಳನ್ನು ಆರಿಸಿ ಫಸ್ಟ್ ಗೆ ಫಿಲಂ ದು ಹೆಸರು ಡಿಸೈಡ್ ಮಾಡ್ತಾರೆ.. ಆಮೇಲೆ ಕಥೆ ಯೋಚನೆ ಮಾಡ್ತಾರೆ.. ಎಂಥ ವಿಪರ್ಯಾಸ ನೋಡಿ.. ಹೆಸರಿಗೆ ಕಥೆ ನ ಅಡ್ಜಸ್ಟ್ ಮಾಡದು.. ಮೊದಲೆಲ್ಲ ಒಳ್ಳೊಳ್ಳೆ ಫಿಲಂ ಪೂರ್ತಿ ಮಾಡಿದ್ಮೇಲೆ ಹಾಡು ಚನ್ನಾಗಿದ್ರೆ ಅದ್ರುದ್ದು ಒಂದು ಪದನ ಅದೇ ಫಿಲಂ ಗೆ ಇಡ್ತಾ ಇದ್ರು.. ಆಮೇಲೆ ಆ ಹಾಡು title-ಸಾಂಗ್ ಅಂತ ಫೇಮಸ್ ಆಗ್ತಿತ್ತು.. ಇರಲಿ ಬಿಡಿ.. ಕಥೆನಾದ್ರು ಏನರ ಸ್ಪೆಷಲ್ ಇರತ್ತಾ ಅನ್ಕೊಂಡ್ರೆ ಅದೂ ಇಲ್ಲ.. ಲವ್ವೋ ಲವ್ವೋ ಲವ್ವು.... ಲಾಂಗೊ ಲಾಂಗೊ ಲಾಂಗು..
-----ಶುಭಂ-----
ಎಲ್ಲೋ ತುಂಬಾ ಅಪರೂಪಕ್ಕೆ ಒಂದೆರಡು ಹಾಸ್ಯ ಚಿತ್ರ, ಕಲೆ ಆಧಾರಿತ ಚಿತ್ರ ಅಥವಾ ನೈಜ ಘಟನಾವಳಿ ಮೇಲೆ ಮಾಡಿದ ಚಿತ್ರಗಳು ಬರ್ತಾ ಇವೆ. ಆದರೆ ಎಲ್ಲರಿಗು ಗೊತ್ತಿರೋ ಹಾಗೆ ಕೆಲವರು ಚಿತ್ರರಂಗವನ್ನು ತಮ್ಮ ಹಿಡಿತದಲ್ಲಿಟ್ಟು ತುಂಬಾ ಹಾಳುಗೆಡಿಸಿದ್ದಾರೆ. ಇತ್ತೀಚಿಗೆ 'tv9' ಅಲ್ಲಿ ಬಂದ ಒಂದು ಕಾರ್ಯಕ್ರಮದಲ್ಲಿ
ಎಲ್ಲೋ ತುಂಬಾ ಅಪರೂಪಕ್ಕೆ ಒಂದೆರಡು ಹಾಸ್ಯ ಚಿತ್ರ, ಕಲೆ ಆಧಾರಿತ ಚಿತ್ರ ಅಥವಾ ನೈಜ ಘಟನಾವಳಿ ಮೇಲೆ ಮಾಡಿದ ಚಿತ್ರಗಳು ಬರ್ತಾ ಇವೆ. ಆದರೆ ಎಲ್ಲರಿಗು ಗೊತ್ತಿರೋ ಹಾಗೆ ಕೆಲವರು ಚಿತ್ರರಂಗವನ್ನು ತಮ್ಮ ಹಿಡಿತದಲ್ಲಿಟ್ಟು ತುಂಬಾ ಹಾಳುಗೆಡಿಸಿದ್ದಾರೆ. ಇತ್ತೀಚಿಗೆ 'tv9' ಅಲ್ಲಿ ಬಂದ ಒಂದು ಕಾರ್ಯಕ್ರಮದಲ್ಲಿ
ಜನರು ಹೇಳ್ತಾರೆ.. "ಏನು ಸಾರ್ ಅಷ್ಟೊಂದು ಕಷ್ಟನಾ ಪರಿಸ್ತಿಥಿ ಅರ್ಥ ಮಾಡ್ಕೊಳಕ್ಕೆ? ಸ್ವಲ್ಪ ಒಳ್ಳೊಳ್ಳೆದುನ್ನ ಮಾಡಿ.. ಡಾನ್ಸ್ ಕುಣಿತ ಬರದೆ ಇದ್ರೆ ಹೀರೋ ಅಗಕ್ಕಾಗಲ್ಲ ಅಂತ ಹೇಳಿದ್ರೆ ಒಳ್ಳೆ ಆಕ್ಟಿಂಗ್ ಮಾಡೋರು ಯಾರು ಸಿಕ್ತಾರೆ ಹೇಳಿ.. ಬರೀ ಅಲ್ಲಿಂದ remake, ಇಲ್ಲಿಂದ dubbing.. ಹಾಡಿಗೂ ಕಥೆಗೂ ಕನೆಕ್ಷನ್ ಇಲ್ದೆ ಇರೋ sequenceಗಳು.. ನಾವು ನೋಡಿದ್ರೂ ಕಷ್ಟ.. ನೋಡದೆ ಇದ್ರೂ ಕಷ್ಟ... ಬೇರೆ ಫಿಲಂಸ್ ಎಲ್ಲ ನೋಡ್ತಿರ ಅಂತ ನಮಗೆ ಹೇಳ್ತಿರ"..
ಒಳ್ಳೆ ಫಿಲಂಸ್ ಬಂದ್ರೆ ನಮಗೂ ಹೇಳಿ.. ನಾವು ನೋಡ್ತಿವಿ..
------ ಶುಭಂ------
on top of it, they complain about the younger generation not watching the movies!!! listening to the songs which they telecast as promos, i wouldnt want to even think about watching those movies!!
ReplyDelete